ಬದುಕಿಬಿಡು
- Abhishek thirthahalli
- Jun 3, 2020
- 1 min read
ನೆನಪುಗಳು......! ಚಿಗುರೊ ಕನಸುಗಳು, ರೆಕ್ಕೆಬಿಚ್ಚಿ ಹಾರುತಲಿದೆ ಮನಸುಗಳು....ಒಂದಾದದ್ದು, ಮುದ್ದಾಡಿದ್ದು, ನಲಿದು ಕುಪ್ಪಳಿಸಿದ್ದು, ನೊಂದು ಮೌನಿಯಾಗಿದ್ದು, ತಿಳಿಯದೆ ತಪ್ಪು ಮಾಡಿದ್ದು ಅದರ ಜೊತೆಯಾಗೇ ಅರಿತು, ಕಲಿತು, ಬೆರೆತು, ಮರೆತ ಪ್ರತಿಯೊಂದು ಕ್ಷಣಗಳೆಲ್ಲವೂ ನೋಡ ನೋಡುತ್ತಿದ್ದಂತೆಯೇ ಸವಿ ಸವಿ ನೆನಪಿನ ಗೂಡಿನಲ್ಲಿ ಸೇರಿಕೊಂಡಿದೆ....
ಏನೋ ಕುತೂಹಲ ಒಂದುಕಡೆ, ಇನ್ನೂ ಅರಿವಾಗದಂತೆ ಕಾಡುತ್ತಿರುವ ನೋವು ಇನ್ನೊಂದೆಡೆ....ಲೋಕಕ್ಕೇ ಭಾದಕವೂ ಮತ್ತೊಂದೆಡೆ....! ಭಾವನೆಗಳ ಅರಿಯುವ ಹಾದಿಯಲ್ಲಿ, ಘಟಿಸುತ್ತಿರುವ ಸನ್ನವೇಶಗಳಿಗೆ ಹೊಂದಿಕೊಳ್ಳುವಲ್ಲಿ...ಕಲ್ಪನೆಗೂ ಮೀರಿದ ಒಡನಾಟದ ನಡುವಿನಲ್ಲಿ, ಸುಳಿವಿಲ್ಲದೆ ಕಳೆಯುತ್ತಿರುವ ಕಾಲವೆಂಬ ಪರಿಧಿಯಲ್ಲಿ ಆ ದೇವರ ಆಟದ ಕೈಗೊಂಬೆಯಾದವರೋ ಎಷ್ಟು ಮಂದಿ..! ನನ್ನ ನಾಳೆಗಳು ಉತ್ತಮವಾಗಿರಬೇಕು ಎಂದವನ ಬಾಳಿಗೆ ಈ ಕೆಟ್ಟ ಸಮಯವು ಇಂದಿನ ದಿನಗಳನ್ನೇ ದೋಚಿಕೊಂಡಿತೇನೋ, ಆದರೂ ಈ ಕಷ್ಟದನಡುವೆಯೂ ಹೊಂದಿಕೊಂಡು, ಗೆದ್ದುಕೊಂಡು ಮುಂಬರುವವನಿಗೆ ಮಾತ್ರ ನಾಳೆ ಕಾದಿರಬಹುದೇನೋ..!!!
- ಅಭಿಷೇಕ್ ತೀರ್ಥಹಳ್ಳಿ
Commentaires